ಅಭಿಪ್ರಾಯ / ಸಲಹೆಗಳು

ಕಂಪನಿಯ ಸಂಕ್ಷಿಪ್ತ ಪಕ್ಷಿನೋಟ

1937 ರಲ್ಲಿ ಕಾರ್ಖಾನೆಯನ್ನು ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ  ಕೃಷ್ಣರಾಜ ಒಡೆಯರ್ ರವರು “ಮೈಸೂರು ಲ್ಯಾಕ್ ಫ್ಯಾಕ್ಟರಿ” ಎಂಬ ನಾಮಾಂಕಿತದಲ್ಲಿ ಸ್ಥಾಪಿಸಿದರು. ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಸದಾಶಯದೊಂದಿಗೆ ಅಂದು ಅರಣ್ಯದಲ್ಲಿ ಹೇರಳವಾಗಿ ಸಿಗುತ್ತಿದ್ದ ‘ಅಂಟು ’ ಎಂಬ ಕಚ್ಚಾಸಾಮಗ್ರಿಯಿಂದ ‘ಸೀಲಿಂಗ್ ವ್ಯಾಕ್ಸ್ ’ ತಯಾರಿಸಿ ಸ್ಥಳೀಯ ಸರ್ಕಾರಿ ಇಲಾಖೆಗಳಿಗೆ, ಖಜಾನೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. 1947 ರಲ್ಲಿ ‘ಮೈಸೂರು ಲ್ಯಾಕ್ ಫ್ಯಾಕ್ಟರಿ’ ಯನ್ನು ಸರ್ಕಾರದ ಸ್ವಾಮ್ಯಕ್ಕೆ ಒಳಪಡಿಸಲಾಯಿತು. ಅಂದಿನಿಂದ ಇದರ ನಾಮಾಂಕಿತವನ್ನು “ಮೈಸೂರು ಲ್ಯಾಕ್ ಅಂಡ್ ವರ್ಕ್ಸ್ ಲಿಮಿಟೆಡ್’ ಎಂದು ಮರು ನಾಮಕರಣ ಮಾಡಲಾಯಿತು. ಸಣ್ಣ ಪ್ರಮಾಣದಲ್ಲಿ ಬಣ್ಣದ ಉತ್ಪಾದನೆಯನ್ನು ಆರಂಭಿಸಲಾಯಿತು. ಮುಂದುವರೆದು, ಅರಣ್ಯದಲ್ಲಿ ಸಿಗುತ್ತಿದ್ದ ಅಂಟು (ಲ್ಯಾಕ್) ಎಂಬ ಸಾಮಗ್ರಿಯ ಲಭ್ಯತೆ ಕಡಿಮೆಯಾದ್ದರಿಂದ ಮತ್ತು ಸೀಲಿಂಗ್ ವ್ಯಾಕ್ಸ್ ಎಂಬ ಉತ್ಪನ್ನಕ್ಕೆ ಬೇಡಿಕೆ ಕಡಿಮೆಯಾಗಿ, ವಾರ್ನಿಷ್ ಉತ್ಪಾದನೆಯ ಕಡೆ ಕಂಪನಿಯು ತೊಡಗಿಸಿಕೊಂಡ ಪ್ರಯುಕ್ತ 1989 ರಲ್ಲಿ ಕಂಪನಿಯ ಹೆಸರನ್ನು “ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್” ಎಂದು ಮತ್ತೆ ಮರು ನಾಮಕರಣ ಮಾಡಲಾಯಿತು.

ಕರ್ನಾಟಕ ಸರ್ಕಾರವು ನಮ್ಮ ಕಂಪನಿಯಲ್ಲಿ ಶೇ 91.39ರಷ್ಟು ಈಕ್ವಿಟಿ ಬಂಡವಾಳವನ್ನು ತೊಡಗಿಸಿದ್ದು, ಉಳಿಕೆ ಬಂಡವಾಳವನ್ನು ಸಾರ್ವಜನಿಕರು ತೊಡಗಿಸಿರುತ್ತಾರೆ.

ಕಂಪನಿಯು 1962 ರಿಂದ ದೇಶದ ಎಲ್ಲಾ ಸಾರ್ವತ್ರಿಕ ಚುನಾವಣೆಗಳಿಗೆ ಅಳಿಸಲಾಗದ ಶಾಯಿಯನ್ನು ಸರಬರಾಜು ಮಾಡಲು ಆರಂಭಿಸಿತು. ಭಾರತದ ಚುನಾವಣಾ ಆಯೋಗ (ಇ.ಸಿ.ಐ) ನ್ಯಾಷನಲ್ ರಿಸರ್ಚ್ ಡೆವಲಪ್‍ಮೆಂಟ್ ಕಾರ್ಪೋರೇಷನ್ (ಎನ್.ಆರ್.ಡಿ.ಸಿ) ಹಾಗೂ ನ್ಯಾಷನಲ್ ಫಿಜಿಕಲ್ ಲ್ಯಾಬೋರೇಟರಿ (ಎನ್.ಪಿ.ಎಲ್) ಇವರ ಸಹಯೋಗದೊಡನೆ ಅಳಿಸಲಾಗದ ಶಾಯಿಯನ್ನು ದೇಶದ್ಯಾಂತ ಸರಬರಾಜು ಮಾಡಲಾಗುತ್ತಿದ್ದು, ದೇಶದ ಪ್ರಜಾಪ್ರಭುತ್ವದ ಯಶಸ್ಸಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ.

1978-79 ನೇ ಸಾಲಿನಲ್ಲಿ ಅಳಿಸಲಾಗದ ಶಾಯಿಯ ಮೊದಲ ರಫ್ತು ವಹಿವಾಟನ್ನು ಕಂಪನಿಯು ಆರಂಭಿಸಿತು. ಇಲ್ಲಿಯವರೆಗೆ ಪ್ರಪಂಚದ ಇಪ್ಪತ್ತೆಂಟು ರಾಷ್ಟ್ರಗಳಿಗೂ ಹೆಚ್ಚು ನಮ್ಮ ಉತ್ಪನ್ನ ಬಳಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಆ ಮೂಲಕ ರಾಷ್ಟ್ರಕ್ಕೆ ಹೆಚ್ಚಿನ ವಿದೇಶಿ ವಿನಿಮಯ ಹರಿದು ಬರಲು ಕಂಪನಿಯೂ ಭಾಗಿಯಾಗಿರುವುದು ಸಂತಸದ ವಿಚಾರವಾಗಿದೆ. 

ಇತ್ತೀಚಿನ ನವೀಕರಣ​ : 06-08-2021 03:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080